Home
TOWN PANCHAYAT COUNCIL SHIRAHATTI
ಇತಿಹಾಸದಲ್ಲಿ ಶರಹಪೂರ ಎಂದು ದಾಖಲಾಗಿರುವ ಶಿರಹಟ್ಟಿಯಲ್ಲಿ ಶಿಥಿಲಕೋಟಿ ಇಂದಿಗೂ ಕಾಣಬಹುದಾಗಿದೆ.ಹಿಂದೂ -ಮುಸ್ಲಿಂ ಭಾವೈಕ್ಯತೆಯ ಕೇಂದ್ರವಾಗಿ ಶಿರಹಟ್ಟಿಯ ಫಕ್ಕಿರೇಶ್ವರ ಮಠ ಪ್ರಸಿದ್ಧಿ ಪಡೆದಿದೆ.ಇಲ್ಲಿ ಪೂಜ್ಯ ಜಗದ್ಗುರು ಫಕ್ಕಿರೇಶ್ವರ ಸಿದ್ಧರಾಮ ಮಹಾಸ್ವಾಮಿಗಳವರು ಭಾವೈಕ್ಯತೆಯ ಜೊತೆಗೆ ಶ್ರೀ ಮಠವನ್ನು ಉದಾತ್ತ ಶಿಕ್ಷಣದತ್ತ ಕೊಂಡೊಯ್ಯುತ್ತಿದ್ದಾರೆ.300 ವರ್ಷಗಳ ಪ್ರಾಚಿನ ಇತಿಹಾಸ ºÉÆAದಿದ ಅವ್ವ ಲಿಂಗವ್ವನ ಸಮಾಧಿ ಇರುವ ಅವ್ವ ಲಿಂಗವ್ವನ ಮಠ ಆಕರ್ಷಕ ಕಟ್ಟಡವಾಗಿದ್ದು ದ್ವಾರಬಂಧವು ಮನಮೋಹಕ ಕೆತ್ತನೆಯಿಂದ ಕೂಡಿದೆ.
ಬರಿ ಮಠಗಳು ದೇವಾಲಯಗಳು ಅಲ್ಲದೆ ಕಣ್ಣಿಗೆ ತಂಪನ್ನೀವ ಮಾಗಡಿ ಕೆರೆ-ಪಕ್ಷಿವಲಸೆಧಾಮ ಶಿರಹಟ್ಟಿಯಿಂದ 8ಕಿ.ಮೀ ದೂರದಲ್ಲಿದೆ.ಸುಮಾರು 35 ಹೇಕ್ಟೇರ ಜಾಗೆಯಲ್ಲಿ ಈ ಕೆರೆ ವ್ಯಾಪಿಸಿದೆ.ಸುಮಾರು 130 ಜಾತಿಯ 5000 ಪಕ್ಷಿಗಳು ಪ್ರತಿವರ್ಷ ವಲಸೆ ಬರುತ್ತವೆ.ಇಲ್ಲಿ ಪ್ರಮುಖವಾಗಿ ಗೀರು ತಲೆಯ ಬಾತುಕೋಳಿಗಳು ಹೆಚ್ಚು .ಇದು ಅಕ್ಟೋಬರದಿಂದ ಫೆಬ್ರುವರಿಯವರೆಗೆ ಪಕ್ಷಿಗಳು ತುಂಬಿರುತ್ತವೆ
Shirahatti is a Town in Shirahatti Taluk , Gadag District , Karnataka State . Shirahatti is 22.92 km distance from its District Main City Gadag . And 334 km distance from its State Main City Bangalore . As of 2001 India census, Shirahatti had a population of 16,208, Shri Jagadguru Fakireshwar Math(Temple) is a famous religious center. Both Hindus & Muslims follow this deity; this is uniqueness of this Math.
Shirahatti is located at 15°14′N 75°35′E / 15.23°N 75.58°E[1]. It has an average elevation of 659 metres (2162 feet)

